Vijayanagar 4th Stage, Outer Ring Road, Mysuru Mon–Sat, 8:30 AM – 6:30 PM 90 minutes from Bengaluru on the expressway
+91 90191 61221 Englishಕನ್ನಡ

ಚಿಕಿತ್ಸಾ ವಿವರ

ಐವಿಎಫ್ (IVF) — ಪ್ರನಾಳ ಶಿಶು ಪದ್ಧತಿ

ಐವಿಎಫ್ ಎಂದರೆ ಅಂಡಾಣುಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ವೀರ್ಯಾಣುಗಳೊಂದಿಗೆ ಫಲೀಕರಣಗೊಳಿಸಿ, ಬೆಳೆದ ಭ್ರೂಣವನ್ನು ಗರ್ಭಾಶಯಕ್ಕೆ ವರ್ಗಾಯಿಸುವ ಪ್ರಕ್ರಿಯೆ.

ವಾಟ್ಸಾಪ್‌ನಲ್ಲಿ ಪ್ರಶ್ನಿಸಿ

ಚಿಕಿತ್ಸೆಯ ಹಂತಗಳು

  1. ಸಮಾಲೋಚನೆ ಮತ್ತು ಪರೀಕ್ಷೆ

    AMH, AFC ಹಾಗೂ ವೀರ್ಯಾಣು ಪರೀಕ್ಷೆಯ ಆಧಾರದ ಮೇಲೆ ವೈಯಕ್ತಿಕ ಚಿಕಿತ್ಸಾ ಯೋಜನೆ ರೂಪಿಸಲಾಗುತ್ತದೆ.

  2. ಅಂಡಾಶಯ ಪ್ರಚೋದನೆ

    9 ರಿಂದ 12 ದಿನಗಳ ಕಾಲ ಚುಚ್ಚುಮದ್ದುಗಳ ಮೂಲಕ ಹಲವು ಅಂಡಾಣುಗಳು ಬೆಳೆಯುವಂತೆ ಮಾಡಲಾಗುತ್ತದೆ.

  3. ಅಲ್ಟ್ರಾಸೌಂಡ್ ಮಾನಿಟರಿಂಗ್

    ಪ್ರತಿ 2–3 ದಿನಗಳಿಗೊಮ್ಮೆ ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆಯ ಮೂಲಕ ಫಾಲಿಕಲ್ ಬೆಳವಣಿಗೆ ಗಮನಿಸಲಾಗುತ್ತದೆ.

  4. ಅಂಡಾಣು ಸಂಗ್ರಹಣೆ

    ಸುಮಾರು 15 ನಿಮಿಷಗಳ ಸಣ್ಣ ಪ್ರಕ್ರಿಯೆ, ಲಘು ಅರಿವಳಿಕೆಯಡಿ ನಡೆಸಲಾಗುತ್ತದೆ.

  5. ಪ್ರಯೋಗಾಲಯದಲ್ಲಿ ಫಲೀಕರಣ

    ಅಂಡಾಣು ಮತ್ತು ವೀರ್ಯಾಣುಗಳ ಸಂಯೋಜನೆ, ಅಥವಾ ಅಗತ್ಯವಿದ್ದರೆ ಇಕ್ಸಿ (ICSI) ಮೂಲಕ ಮೈಕ್ರೊ-ಇಂಜೆಕ್ಷನ್.

  6. ಬ್ಲಾಸ್ಟೊಸಿಸ್ಟ್ ಕಲ್ಚರ್

    5 ರಿಂದ 6 ದಿನಗಳ ಕಾಲ ಭ್ರೂಣಗಳನ್ನು ವಿಶೇಷ ಇನ್‌ಕ್ಯುಬೇಟರ್‌ಗಳಲ್ಲಿ ಬೆಳೆಸಲಾಗುತ್ತದೆ.

  7. ಭ್ರೂಣ ವರ್ಗಾವಣೆ

    ಸುಮಾರು 10 ನಿಮಿಷಗಳ ನೋವುರಹಿತ ಪ್ರಕ್ರಿಯೆ. ಅರಿವಳಿಕೆ ಅಗತ್ಯವಿಲ್ಲ.

ಮೇಲಿನ ಸಮಯಗಳು ಸಾಮಾನ್ಯ ಅಂದಾಜು ಮಾತ್ರ. ಪ್ರತಿಯೊಬ್ಬರ ದೇಹಸ್ಥಿತಿ ಭಿನ್ನವಾಗಿರುತ್ತದೆ. ನಿಮ್ಮ ವೈದ್ಯರ ಸಲಹೆಯೇ ಅಂತಿಮ.
ಈ ಪುಟದ ಮಾಹಿತಿ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯಕೀಯ ಸಲಹೆ ಅಥವಾ ರೋಗನಿರ್ಣಯವಲ್ಲ. ಪ್ರತಿಯೊಬ್ಬರ ದೇಹಸ್ಥಿತಿ ಭಿನ್ನವಾಗಿರುವುದರಿಂದ, ಅರ್ಹ ಸಂತಾನೋತ್ಪತ್ತಿ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.